VIDEO: ಕಟಕಟ್ ₹8,500 ಕೊಡಿ.. ಕಾಂಗ್ರೆಸ್ ಕಚೇರಿ ಮುಂದೆ ರಾಹುಲ್ ಗಾಂಧಿಗೆ ಮಹಿಳೆಯರ ಪಟ್ಟು!

author-image
admin
Updated On
VIDEO: ಕಟಕಟ್ ₹8,500 ಕೊಡಿ.. ಕಾಂಗ್ರೆಸ್ ಕಚೇರಿ ಮುಂದೆ ರಾಹುಲ್ ಗಾಂಧಿಗೆ ಮಹಿಳೆಯರ ಪಟ್ಟು!
Advertisment
  • ತಿಂಗಳಗೆ 8,500 ರೂ. ಅಂತೆ ವರ್ಷಕ್ಕೆ 1 ಲಕ್ಷ 2 ಸಾವಿರ ನೀಡಬೇಕು
  • ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಬಂದಿರುವ ಮಹಿಳೆಯರು
  • ಕಟಕಟ್ ಅಂತ 8,500 ರೂಪಾಯಿಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್!

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರಿಗೆ ಕಟಕಟ್ ಭರವಸೆ ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಜುಲೈ ತಿಂಗಳಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಕಟಕಟ್, ಕಟಕಟ್ ಅಂತ 8,500 ರೂಪಾಯಿ ಜಮೆಯಾಗಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಲ್ಲಿ 8,500 ರೂಪಾಯಿ ನೀಡುವ ಭರವಸೆಯನ್ನು ನೀಡಲಾಗಿತ್ತು.

ಇದನ್ನೂ ಓದಿ:ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಬೈಎಲೆಕ್ಷನ್.. ಆ ಮೂರು ಕ್ಷೇತ್ರಗಳು ಯಾವುದು? 

ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಿಸಲ್ಟ್ ಬಳಿಕ ರಾಹುಲ್ ಗಾಂಧಿ ಹೇಳಿಕೆಯನ್ನು ನಂಬಿದ್ದ ಮಹಿಳೆಯರು ಲಕ್ನೋದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾರೆ. ಕಟಕಟ್ ಅಂತ 8,500 ರೂಪಾಯಿ ಹಾಕುವ ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಬಂದ ಮಹಿಳೆಯರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುತ್ತಿದ್ದಾರೆ.


">April 26, 2024

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದುಕೊಂಡು ಬಂದಿರುವ ಮುಸ್ಲಿಂ ಸಮುದಾಯದ ಮಹಿಳೆಯರು ಚುನಾವಣೆಗೂ ಮುಂಚೆ ಕೊಟ್ಟ ಭರವಸೆಯಂತೆ ತಿಂಗಳಿಗೆ ಎಂಟೂವರೆ ಸಾವಿರ ರೂಪಾಯಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಲಕ್ನೋ ಕಾಂಗ್ರೆಸ್ ಕಚೇರಿ ಮುಂದೆ ಮಹಿಳೆಯರು, ನಾವು ನಮಗೆ ಭರವಸೆ ಕೊಟ್ಟ 8,500 ರೂಪಾಯಿ ಹಣ ಪಡೆಯಲು ಬಂದಿದ್ದೇವೆ. ರಾಹುಲ್ ಗಾಂಧಿ ಅವರು ತಿಂಗಳಗೆ 8,500 ರೂಪಾಯಿ ಅಂತೆ ವರ್ಷಕ್ಕೆ 1 ಲಕ್ಷ 2 ಸಾವಿರ ನೀಡಬೇಕು ಎನ್ನುತ್ತಿದ್ದಾರೆ.


">June 5, 2024

ಲೋಕಸಭಾ ಚುನಾವಣೆಯಲ್ಲಿ NDAಗೆ ಬಹುಮತ ಬಂದಿದ್ದು, ಗ್ಯಾರಂಟಿ ಭರವಸೆ ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯದೇ ವಿರೋಧ ಪಕ್ಷದಲ್ಲಿ ಕೂರುವ ಸ್ಥಿತಿಯಲ್ಲಿದೆ. ಆದರೂ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಬೇಕೆಂಬ ಆಸೆಯಲ್ಲಿ ಮಹಿಳೆಯರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment